Autoimmune conditions, COVID-19, Hashimoto's disease, Recipe, spoonie

COVID-19 Guidelines for Vulnerable Groups & Caregivers – In Kannada

ಕೊರೊನಾ ವೈರಸ್ ಸೋಂಕಿಗೆ ತುತ್ತಾಗುವ ಸಂಭವವಿರುವ ಜನವರ್ಗಗಳಿಗೆ ಹಾಗು ಆರೈಕೆ ಮಾಡುವವರಿಗೆ COVID-19 ಕುರಿತು ಕೆಲವು ಮಾರ್ಗಸೂಚಿಗಳು

ಮುಂದಾಳತ್ವ ವಹಿಸಿರುವವರು: ಡಾ. ಅನುಭಾಮಹಾಜನ್, (General Dentist & Founder, Chronic Pain India) ಇವರೊಂದಿಗೆ ಡಾ. ಪಿಯುಷ್ಗೋಯಲ್ (Senior consultant Pulmonogy & Critical care, Columbia Asia Hospital,Gurgaon), ಡಾ. ಪಾರುಲ್ಪ್ರಿಂಜಾ (Internal Medicine & palliative/supportive care specialist, Columbia Asia Hospital, Gurgaon), ಡಾ. ಖಾನ್ಅಮಿರ್ಮರೂಫ್, (Associate Professor, Community Medicine, UCMS & GTB Hospital, Dilshad Garden, New Delhi), ಡಾ. ಅಭಿಲಾಶಾಕಪೂರ್ (Junior Resident, Community Medicine, UCMS & GTB Hospital, Dilshad Garden, New Delhi), ಡಾ. ಸಂತೋಷ್ಕುಮಾರ್ಸುಂದರಂ(Junior Resident, Community Medicine, UCMS & GTB Hospital, Dilshad Garden, New Delhi)

(March,2020)

ಉದ್ದೇಶಗಳು:

  1. ಅಂಗವೈಕಲ್ಯ, ದೀರ್ಘಕಾಲ ರೊಗಗಳು, ನಿರೋಧಕಶಕ್ತಿ ಕುರಿತಾದ ರೋಗಗಳು ಹಾಗು ಅಪರೂಪದ ಕಾಯಿಲೆಗಳಿಂದ ಬಳಲುತ್ತಿರುವವರ ನಡುವೆ COVID-19 ಸೋಂಕನ್ನು ತಡೆಗಟ್ಟಲು ಸಾಮುದಾಯಿಕವಾಗಿ ತಯಾರಾಗುವುದು.
  2. COVID-19 ಸೋಂಕನ್ನು ಅವರ ಕುಟುಂಬಸ್ಥರಿಗೆ ಹಾಗು ಆರೈಕೆ ನೀಡುವವರಿಗೆ ಹರಡದಂತೆ ತಡೆಗಟ್ಟುವ ವಿಧಾನಗಳು.

ಅಂಗವೈಕಲ್ಯ, ದೀರ್ಘಕಾಲರೊಗಗಳು, ನಿರೋಧಕಶಕ್ತಿಕುರಿತಾದರೋಗಗಳುಹಾಗುಅಪರೂಪದಕಾಯಿಲೆಗಳಿಂದಬಳಲುತ್ತಿರುವವರನಡುವೆCOVID-19 ಸೋಂಕನ್ನುತಡೆಗಟ್ಟಲುಸಾಮುದಾಯಿಕವಾಗಿತಯಾರಾಗುವುದು:

  1. ಎಲ್ಲಾ ರೀತಿಯ ಸಾಮೂಹಿಕ ಸಭೆಗಳನ್ನು ತಪ್ಪಿಸುವುದು – ಮನೆಗಳಲ್ಲಾಗಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಾಗಲಿ. 
  2. ಮನೆಯಿಂದಲೇ ಕೆಲಸ ಮಾಡುವುದು ಸೂಕ್ತ.
  3. ಮುಂಜಾಗ್ರತಾ ಕ್ರಮ, ತಡೆಗಟ್ಟುವಿಕೆ ಹಾಗು ಚಿಕಿತ್ಸೆಯ ಕುರಿತಾದ ಅರಿವನ್ನು ಎಲ್ಲಾ ಡಿಜಿಟಲ್ ಮಾಧ್ಯಮಗಳ ಮೂಲಕ ಹರಡುವುದು [ಸರ್ಕಾರದ ಮಾರ್ಗಸೂಚಿಯ ಅನುಸಾರ].
  4. ಲ್ಯಾಬ್ ಪರೀಕ್ಷೆ ನಡೆಸುವ ಸುತ್ತಮುತ್ತಲಿನ ಆರೋಗ್ಯ ಕೆಂದ್ರಗಳ ಕುರಿತು ತಿಳುವಳಿಕೆ.
  5. ಸಣ್ಣಪುಟ್ಟ ಸಮಸ್ಯೆಗಳ ಕುರಿತು ವೈದ್ಯಕೀಯ ಸಲಹೆಗಳಿಗಾಗಿ ಆಸ್ಪತ್ರೆಗೆ ಹೋಗುವುದು ಹಾಗು ಫಾಲೋ ಅಪ್ ಭೇಟಿಗಳನ್ನು ಕಡಿಮೆ ಮಾಡುವುದು.
  6. ಭೌತ್ಸಚಿಕಿತ್ಸಕರು ಹಾಗು ಔದ್ಯೋಗಿಕ ಚಿಕಿತ್ಸಕರು ಏಪ್ರನ್, ಮಾಸ್ಕ್, ಗ್ಲವ್ಸ್ ಅಂತಹ ಸುರಕ್ಷಾ ಸಲಕರಣೆಗಳೊಂದಿಗೆ ಗೃಹಭೇಟಿ ನೀಡಬಹುದು. ಕೆಮ್ಮು, ಶೀತ, ಜ್ವರದಂತಹ ರೋಗಲಕ್ಷಣಗಳಿದ್ದರೆ ಕೂಡಲೇ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಬೇಕು.
  7. ಔಷಧಿಗಳನ್ನು ತಪ್ಪದೇ ತೆಗೆದುಕೊಳ್ಳುವುದು ಹಾಗು COVID-19 ಸೋಂಕಿನ ರೋಗಲಕ್ಷಣಗಳನ್ನು ಹೊಂದಿರುವವರು ಮನೆಯಲ್ಲಿ ಎಕಾಂತದಲ್ಲಿ ಇಲ್ಲದೇ ಇರುವಾಗ ನೆಬ್ಯುಲೈಸೇಷನ್ ಅಥವಾ ಹಬೆ ತೆಗೆದುಕೊಳ್ಳುವುದನ್ನು ತಡೆಯಬೇಕು. 
  8. ಸೂಕ್ಷ್ಮ ರೋಗಲಕ್ಷಣಗಳು ಕಂಡುಬಂದಲ್ಲಿ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಿ ಮನೆಯಲ್ಲೇ ಕ್ವಾರಂಟೀನ್ ಮಾಡಿಕೊಳ್ಳತಕ್ಕದ್ದು.
  9. ಅಗತ್ಯವಾದ ಔಷಧಿಗಳನ್ನು ಮತ್ತಿನ್ನಿತರ ಅಗತ್ಯತೆಗಳನ್ನು ಕೂಡಿಡುವುದು. 
  10. ಜ್ವರ, ಕೆಮ್ಮು, ಭೇದಿ ಅಥವಾ ಉಸಿರುಕಟ್ಟುವಿಕೆ ಇಲ್ಲದೇ ಇದ್ದಲ್ಲಿ ಸ್ನಾಯು ಆಯಾಸ ಅಥವಾ ಕ್ರೋನಿಕ್ ಆಯಾಸಗಳನ್ನು COVID-19 ನ ರೋಗಲಕ್ಷಣಗಳೆಂದು ಆತಂಕ ಪಡಬಾರದು.
  11. ತುರ್ತಿನ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಎಂಬುದನ್ನು ಹಾಗು ತಯಾರಾಗುವಿಕೆಯ ಕ್ರಮಗಳ ಬಗ್ಗೆ ತಿಳಿಯಲು ಪರಿವಾರದ ವೈದ್ಯರ ಬಳಿ ಮಾತನಾಡಿ.
  12. ಆಗಾಗ, ಸಾಬೂನಿನೊಂದಿಗೆ ಅಥವಾ ಸ್ಯಾನಿಟೈಜ಼ರ್ ಗಳೊಂದಿಗೆ ಕೈ ತೊಳೆದುಕೊಳ್ಳುತ್ತಿರಬೇಕು. ನಿರೋಧಕಶಕ್ತಿ ಆಧರಿಸಿದ ರೋಗ ಉಳ್ಳುವವರಿರುವ ವಾತಾವರಣಗಳಲ್ಲಿ ಸೋಡಿಯಂ ಹೈಪೋಕ್ಲೋರೈಟ್ ಅಂತಹ ಸೋಂಕುನಾಶಕಗಳೊಂದಿಗೆ ಆಗಾಗ ಮೇಲ್ಪದರ ಸ್ವಚ್ಛಮಾಡುತ್ತಿರಬೇಕು.
  13. ತುರ್ತು ಪರಿಸ್ಥಿತಿಗಳಲ್ಲಿ, ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಬೇಕು. ವೈದ್ಯರಿಗೆ ಗೃಹಭೇಟಿ ಅವಶ್ಯಕವೆನಿಸಿದರೆ, ಹಾಗೆಯೇ ಮಾಡಿ. ಆಸ್ಪತ್ರೆಗೆ ಹೋಗುವುದನ್ನು ಆದಷ್ಟು ತಡೆಯಿರಿ.
  14. ನೀವು ವೀಲ್ ಚೇರ್ ಬಳಕೆದಾರರಾಗಿದ್ದರೆ, ನಿಮ್ಮ ವೀಲ್ ಚೇರನ್ನು ಪ್ರತಿದಿನ ಸ್ವಚ್ಛ ಮಾಡಿ (ಸ್ಯಾನಿಟೈಜ಼್). ಮುಖ್ಯವಾಗಿ ಚಕ್ರಗಳನ್ನು ಹಾಗು ಅವುಗಳ ಅಂಚುಗಳನ್ನು ಸ್ವಚ್ಛ ಮಾಡುತ್ತಿರಿ. ಊರುಗೋಲುಗಳನ್ನು, ಅದರಲ್ಲೂ, ಉಪಯೊಗಿಸಿದ ನಂತರ ಸ್ವಚ್ಛ ಮಾಡಿ.
  15. ಅಡ್ಡಕಂಬಿಗಳು ಸ್ವಚ್ಛವಾಗಿರಬೇಕು.
  16. ಸಾಮಾಜಿಕ ದೂರ ಉಳಿಯುವಿಕೆ ತಲೆ ಚಿಟ್ಟುಹಿಡಿಸುವಂತದ್ದು, ನಿಜ. ಅಂತಹ ಸಂದರ್ಭಗಳಲ್ಲಿ ಈ ಸರಳ ಮಾರ್ಗಗಳನ್ನು ತಾವು ಬಳಸಬಹುದು:
    • ನಿಮಗೆ ಇಷ್ಟವಾಗುವಂತಹ ಕೆಲಸಗಳನ್ನು ಮನೆಯಲ್ಲಿಯೇ ಮಾಡಿ. ಉದಾಹರಣೆಗೆ, ಟಿ.ವಿ. ನೋಡುವುದು, ಪುಸ್ತಕ ಓದುವುದು, ಒಳಾಂಗಣ ಚಟುವಟಿಕೆಗಳು, ಇತ್ಯಾದಿ.
    • ಆರೋಗ್ಯಕರ ಹಾರ ಸೇವಿಸಿ, ಸಾಕಷ್ಟು ನೀರು ಕುಡಿಯಿರಿ.
    • ಮನೆಯಲ್ಲಿಯೇ ಮಾಡಬಹುದಾದ ಕೆಲವು ವ್ಯಾಯಾಮಗಳನ್ನು ಮಾಡಿರಿ.
    • ಧ್ಯಾನ ಹಾಗು ಶ್ವಾಸ ಸಂಬಂಧಿತ ವ್ಯಾಯಾಮಗಳು.
    • ಶಾಂತವಾದ ಸಂಗೀತವನ್ನು ಆಲಿಸುವುದು.
    • ಮೈಂಡ್ಫುಲ್ನೆಸ್ ಮೆಡಿಟೇಶನ್
  17. ನಿಮ್ಮ ಸ್ನೇಹಿತ-ಸಂಬಂಧಿಕರೊಡನೆ ಫೋನ್ ಕಾಲ್ ಮೂಲಕ ಅಥವಾ ವಿಡಿಯೋ ಕಾಲ್ ಮೂಲಕ ಸಂಪರ್ಕದಲ್ಲಿರಿ.

COVID-19 ಸೋಂಕನ್ನುಅವರಕುಟುಂಬಸ್ಥರಿಗೆಹಾಗುಆರೈಕೆನೀಡುವವರಿಗೆಹರಡದಂತೆತಡೆಗಟ್ಟುವವಿಧಾನಗಳು:

  1. ಪೋಷಣೆ ನೀಡುವವರಿಗೆ ಹಾಗು ಕುಟುಂಬಸ್ಥರಿಗೆ ಸುರಕ್ಷಾ ಸಲಕರಣೆಗಳ ವಿತರಣೆ (ಉದಾಹರಣೆಗೆ, ಗಲ್ವ್ಸ್, ಮಾಸ್ಕ್, ಏಪ್ರನ್). ಆರೋಗ್ಯವಾಗಿರುವವರು ಮಾಸ್ಕ್ ಧರಿಸಬೇಕಾದ ಸಂದರ್ಭಗಳು:
    • ಶಂಕಿತ ರೋಗಿಗಳನ್ನು ನೋಡಿಕೊಳ್ಳುವಾಗ
    • ಕೆಮ್ಮುಶೀತದಂತಹ ರೋಗಲಕ್ಷಣಗಳಿದ್ದಾಗ
    • ಗಮನಿಸಿ: ಆಗಾಗ ಕೈ ತೊಳೆಯುವುದು ಮುಖ್ಯ. ಸೋಂಕಿತ ವ್ಯಕ್ತಿಗೆ ಆರೈಕೆ ನೀಡುವ ಮುನ್ನ ಮತ್ತು ನಂತರ ಕನಿಷ್ಠ 20-30 ಸೆಕೆಂಡ್ ಗಳ ಕಾಲ ಸಾಬೂನಿನೊಂದಿಗೆ ಕೈ ತೊಳೆಯತಕ್ಕದ್ದು.
  2. ಕನಿಷ್ಠ 1 ಮೀಟರ್ರಿನಷ್ಟು ಸಾಮಾಜಿಕ ದೂರ ಉಳಿಯುವಿಕೆಯನ್ನು ಅಭ್ಯಸಿಸಬೇಕು.
  3. ಕನಿಷ್ಠ ನೇರ ಸ್ಪರ್ಷ. ಉದಾಹರಣೆಗೆ, ಕೈ ಕುಲುಕುವುದಾಗಲಿ, ಕಣ್ಣು, ಮೂಗು, ಬಾಯನ್ನು ಮುಟ್ಟುವುದಾಗಲಿ.
  4. ಮಾಸ್ಕ್ ಧರಿಸುವ ಮುನ್ನ ಕೈ ತೊಳೆಯುವುದು. ಮಾಸ್ಕ್ ಗಳು ಆರು ಗಂಟೆಗಳಿಗಿಂತ ಹೆಚ್ಚು ಬಳಕೆಯಾಗಿದ್ದರೆ ಅಥವಾ ಹಸಿಯಾಗಿದ್ದರೆ ಬದಲಾಯಿಸತಕ್ಕದ್ದು.
  5. ಕೇವಲ ಪಟ್ಟಿಯನ್ನು ಅಥವಾ ಎಲಾಸ್ಟಿಕನ್ನು ಹಿಡಿದು ಮುಚ್ಚಿದ ಕಸಡಬ್ಬಿಗೆ ಹಾಕಿ. ಮತ್ತೆ ಕೈ ತೊಳಯಿರಿ.
  6. ಸೀನುವಾಗ ಟಿಶ್ಯು ಅಥವಾ ಮೊಣಗೈ ಬಳಸಿ.
  7. ಬಟ್ಟೆ ಮಾಸ್ಕ್ ಬಳಸಬೇಡಿ.
  8. ಕೆಮ್ಮುವಾಗ ಪಾಲಿಸಬೇಕಾದ ನಿಯಮಗಳು, ಟಿಶ್ಯು, ಮಾಸ್ಕ್ ಅಂತಹ ಸೋಂಕಿತ ವಸ್ತುಗಳ ವಿಲೇವರಿ, ಇತ್ಯಾದಿ ವಿಷಯಗಳ ಕುರಿತು ಸಮುದಾಯಗಳಿಗೆ ಆರೋಗ್ಯ ಶಿಕ್ಷಣ ನೀಡುವುದು.
  9. ಆರೈಕೆ ನೀಡುವವರು ಹಾಗು ಅಟೆಂಡರ್ ಗಳು ಸಾಮೂಹಿಕ ಸಭೆಗಳು ನಡೆಯುವ ಸ್ಥಳಗಳನ್ನು ಭೇಟಿ ನೀಡುವುದನ್ನು ತಡೆಯಬೇಕು.
  10. ಡೈಯಾಬೇಟಿಸ್, ಹೈಪರ್ ಟೆನ್ಷನ್ ಹಾಗು ಇನ್ನಿತರ ಕ್ರೋನಿಕ್ (ದೀರ್ಘಕಾಲಿಕ) ಕಾಯಿಲೆಗಳಿಂದ ಬಳಲುತ್ತಿರುವವರು ಸೋಂಕಿತರ ಸಂಪರ್ಕದಲ್ಲಿದ್ದಾಗ ಅಧಿಕವಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.
  11. ಸೋಂಕಿತ ಅಥವಾ ಶಂಕಿತ ಕುಟುಂಬಸ್ಥರಿಗೆ ಅಥವಾ ನೆರೆಯವರಿಗೆ ಮಾನಸಿಕ ಬೆಂಬಲ ನೀಡಿ. ಅತಿಯಾದ ಏಕಾಂತ ಅವರಿಗೆ ಮತ್ತಷ್ಟು ಮಾನಸಿಕ ಒತ್ತಡ ನೀಡಬಹುದು.

ಗೃಹಕ್ವಾರಂಟೀನ್ಗಾಗಿ

ಗೃಹ ಕ್ವಾರಂಟೀನ್ನಲ್ಲಿರುವಾಗ ಸೋಂಕಿತರನ್ನು ಶೌಚಾಲಯವಿರುವ ಪ್ರತ್ಯೇಕ ಕೊಠಡಿಯಲ್ಲಿಡಲು ಸಾಧ್ಯವಾದರೆ ಉತ್ತಮ. ಇಲ್ಲವಾದಲ್ಲಿ ಸಾಮಾಜಿಕ ದೂರ ಉಳಿಯುವಿಕೆಯನ್ನು ಅಭ್ಯಸಿಸಬೇಕು.

  1. ಪ್ರತ್ಯೇಕ ಶೌಚಾಲಯವಿರುವ, ಗಾಳಿಗೆ ಕೊರತೆಯಿಲ್ಲದ ವೆಂಟಿಲೇಟೆಡ್ ಕೊಠಡಿಯಲ್ಲಿರಿ. 
  2. ಆರೈಕೆ ನೀಡುವವರು ಕೊಠಡಿಯಲ್ಲೇ ಇರುವ ಅವಶ್ಯಕತೆಯಿದ್ದರೆ ಕನಿಷ್ಠ ಒಂದು ಮೀಟರ್ ಅಂತರ ಕಾಪಾಡಿ. 
  3. ಕ್ವಾರಂಟೀನ್ ಗೆ ಒಳಗಾಗಿರುವವರನ್ನು ನೋಡಿಕೊಳ್ಳಲು ಕೇವಲ ಒಬ್ಬ ಕುಟುಂಬಸ್ಥರಿರಬೇಕು.
  4. ಬೆಡ್ ಶೀಟ್ ಗಳು ಹಾಗು ಹಾಸು ಬಟ್ಟೆಗಳು ಅಲ್ಲಾಡದಂತೆ ಆದಷ್ಟು ತಡೆಯಬೇಕು.
  5. ಮಾಸ್ಕ್ ಟಿಶ್ಯುಗಳ ವಿಲೇವರಿ: ಮಾಸ್ಕ್ ಟಿಶ್ಯಗಳನ್ನು ಮುಚ್ಚಿದ ಕಸಡಬ್ಬಿಗಳಿಗೆ ಹಾಕಿದ ನಂತರ ಸಾಧಾರಣ ಬ್ಲೀಚ್ ದ್ರಾವಣ (5%) ಅಥವಾ ಸೋಡಿಯಂ ಹೈಪೋಕ್ಲೋರೈಟ್ ದ್ರಾವಣ (1%) ಡಬ್ಬಿಗೆ ಹಾಕಬೇಕು. ನಂತರ ಅದನ್ನು ಸುಡಬೇಕು (ಸುಲಭ ವಿಧಾನ) ಅಥವಾ ಆಳವಾಗಿ ಹೂಳಬೇಕು. ಬಾತ್ರೂಂ ಕ್ಲೀನರ್ ಗಳಲ್ಲಿ ಸಾಮನ್ಯವಾಗಿ ಸೋಡಿಯಂ ಹೈಪೋಕ್ಲೋರೈಟ್ ದ್ರಾವಣ ಇರುತ್ತದೆ.
  6. ಮನೆಯಲ್ಲಿ ಒಬ್ಬರೆ ವಾಸಿಸುತ್ತಿರುವವರು ಮನೆಯಲ್ಲಿ ಓಡಾಡಬಹುದು.
  7. ಸೋಂಕಿತರನ್ನು ತಾರತಮ್ಯಕ್ಕೆ ಒಳಪಡಿಸುವುದನ್ನು ಅಥವಾ ನಿರ್ಲ್ಯಕ್ಷಿಸುವುದನ್ನು ಮಾಡಕೂಡದು. ಅವರಲ್ಲಿ COVID-19 ನಿವಾರಿಸಬಹುದಾದ ಕಾಯಿಲೆ ಎಂಬುದನ್ನು ಮನದಟ್ಟು ಮಾಡಬೇಕು.

ಮನೆಯ ಒಬ್ಬ ಸದಸ್ಯ ನೆಗಡಿ ಮತ್ತು ಜ್ವರದಂತಹ ಅಥವಾ ಹೋಲುವ ರೋಗಲಕ್ಷಣಗಳಿಂದ ಬಳಲುತ್ತಿದ್ದರೆ:

  1. ಆತಂಕ ಪಡಬೇಡಿ.
  2. ವೈದ್ಯರನ್ನು ಸಂಪರ್ಕಿಸಿ, ದೂರವಾಣಿ ಸಲಹೆಗಳನ್ನು ಪಡೆಯಿರಿ.
  3. ಬೇರೆ ವೈರಲ್ ಕಾಯಿಲೆಗಳಿದ್ದಾಗ ಮಾಡುವಂತೆಯೇ ಹೆಚ್ಚು ನೀರು ಕುಡಿಯಿರಿ.
  4. ಸೂಚಿಸಿದಂತಯೇ ಮಾತ್ರೆಗಳನ್ನು ತೆಗೆದುಕೊಳ್ಳಿ.
  5. ಸರಿಯಾದ ಸಮಯಕ್ಕೆ ಆಹಾರ ಸೇವಿಸಿ. ಉಪವಾಸ ಮಾಡುವುದನ್ನು ತಪ್ಪಿಸಿ.
  6. ಗಾಳಿಗೆ ಕೊರತೆಯಿಲ್ಲದಂತಹ ವೆಂಟಿಲೇಟ್ ಆಗಿರುವ ಪ್ರತ್ಯೇಕ ಕೊಠಡಿಯಲ್ಲೆ ವಾಸ ಮಾಡಿ.
  7. ಉಸಿರಾಡಲು ತೊಂದರೆಯಾದರೆ, ಏನನ್ನೂ ಸೇವಿಸಲಾಗದಿದ್ದರೆ ಅಥವಾ ಪ್ರತಿ 2 ತಾಸುಗಳಿಗೊಮ್ಮೆ ಮೂತ್ರ ವಿಸರ್ಜಿಸಲಾಗದಿದ್ದರೆ ಮಾತ್ರ ಆಸ್ಪತ್ರೆಗೆ ಹೋಗಿ.

 ವಾತಾವರಣದನೈರ್ಮಲ್ಯ

  1. ಕ್ವಾರಂಟೀನ್ ಗೆ ಒಳಗಾಗಿರುವವರ ಕೊಠಡಿ / ಮೇಜಿನ ಮೇಲ್ಮೈ / ಹಾಸಿಗೆಯ ಅಂಚು / ನೆಲವನ್ನು 1% ಸೋಡಿಯಂ ಹೈಪೋಕ್ಲೋರೈಟ್ ದ್ರಾವಣದೊಂದಿಗೆ ಮೆಲ್ಪದರ ಸ್ವಚ್ಛತೆ ಮಾಡಬೇಕು.
  2. ಸಾಧಾರಣ ಡಿಟರ್ಜಂಟೊಂದಿಗೆ ಪ್ರತ್ಯೇಕವಾಗಿ ಬಟ್ಟೆಗಳನ್ನು ಒಗೆಯಬೇಕು.
  3. ಶೌಚಾಲಯದ ಕುರ್ಚಿಯನ್ನು ‍ಫೀನೋಲ್ ಯುಕ್ತ ಸೋಂಕುನಿವಾರಕದೊಂದಿಗೆ ಪ್ರತಿದಿನ ಸ್ವಚ್ಛ ಮಾಡಬೇಕು.
  4. ಒಗೆಯಬಹುದಾದ ಮಾಸ್ಕ್ ಹಾಗು ಏಪ್ರನ್ ಗಳನ್ನು ಒಗೆಯುವ ಮುನ್ನ ಸೋಡಿಯಂ ಹೈಪೋಕ್ಲೋರೈಟ್ ನೊಂದಿಗೆ ಸೋಂಕು ನಿವಾರಿಸಿ ಬಿಸಿಲಿನಲ್ಲಿ ಒಣಗಿಸಬೇಕು.

ಅತ್ಯಂತಅಪಾಯದಲ್ಲಿರುವವರಿಗೆಸಲಹೆಗಳು

  1. ಗಾಳಿಗೆ ಕೊರತೆಯಿಲ್ಲದಂತಹ ವೆಂಟಿಲೇಟ್ ಆಗಿರುವ ಕೊಠಡಿಗಳಲ್ಲಿ ವಾಸ ಮಾಡಿ. ಕಿಟಕಿ ಬಾಗಿಲುಗಳನ್ನು ತೆರೆದಿಡಿ ಹಾಗು ಮನೆಯ ಒಳಗೇ ಇರಲು ಪ್ರಯತ್ನಿಸಿ.
  2. ಆರೈಕೆ ನೀಡುವವರು ಮಾಸ್ಕ್ ಗಳನ್ನು ಧರಿಸಬೇಕು. ಅವರನ್ನು ನಿಭಾಯಿಸುವ ಮುನ್ನ ಕೈಗಳನ್ನು ತೊಳೆಯಬೇಕು. 
  3. ಮನೆಯ ಮತ್ತೊಬ್ಬ ಸದಸ್ಯ ಸೋಂಕಿಗೆ ಒಳಗಾದರೆ ಕನಿಷ್ಠ 1 ಮೀಟರ್ ಅಂತರ ಕಾಪಾಡಿ.
  4. ಹಲವಾರು ಕಾಯಿಲೆಗಳಿಂದ ಬಳಲುತ್ತಿರುವವರಲ್ಲಿ ರೋಗಲಕ್ಷಣಗಳು ಕಂಡುಬಂದರೆ, ಮಾಸ್ಕ್ ಧರಿಸಿ, ಕೈಗಳಿಗೆ ಸ್ಯಾನಿಟೈಜ಼ರ್ ಹಾಕಿದ ನಂತರ ವೈದ್ಯರನ್ನು ಸಂಪರ್ಕಿಸಿ ಭೇಟಿ ನೀಡಿ.

ಸಾಮಗ್ರಿಗಳನ್ನುಮನಗೆತರುವುದರಕುರಿತುಸಲಹೆಗಳು :

  1. ಕೊಳೆಯದೇ ಇರುವ ಪದಾರ್ಥಗಳನ್ನು ಅಥವಾ ಪ್ಯಾಕೆಟ್ ಗಳನ್ನು ತಂದಾಗ, ಅವುಗಳನ್ನು ಮನೆಯ ಬಾಗಿಲಿನ ಬಳಿಯೇ 24 ಗಂಟೆಗಳ ಕಾಲ ಇಡಿ. ಮುಂದಿನ ದಿನ, ಪ್ಯಾಕೆಟ್ ತೆಗೆದು ಪದಾರ್ಥ ತೆಗೆದು, ಕೈ ತೊಳೆದು ಮನೆಯೊಳಗೆ ತೆಗೆದುಕೊಂಡು ಹೋಗಿ. ಪ್ಯಾಕಿಂಗ್ ವಸ್ತುಗಳನ್ನು ಕೂಡಲೆ ವಿಲೇವರಿ ಮಾಡಿ.
  2. ಕೊಳೆಯಬಹುದಾದ ಪದಾರ್ಥಗಳನ್ನು: ಹಾಲಿನ ಪ್ಯಾಕೆಟ್ – ಸಾಬೂನು ಹಾಗು ನೀರಿನೊಂದಿಗೆ ತೊಳೆಯಿರಿ. ತರಕಾರಿಗಳು – ನೀರಿನೊಂದಿಗೆ ಚೆನ್ನಾಗಿ ತೊಳೆಯಿರಿ.
  3. ಆಚೆ ಓಡಾಡಲು ಪ್ರತ್ಯೇಕ ಪಾದರಕ್ಷೆಗಳನ್ನು ಮೀಸಲಿಡಿ. ಮನೆಯಾಚೆಯೇ ಅವುಗಳನ್ನು ಬಿಡಿ.
  4. ಹಾಗೆಯೇ, ಆಚೆ ಹಾಕಿದ ವಸ್ತ್ರಗಳನ್ನು ಮನೆಯೊಳಗೆ ಬಂದ ಕೂಡಲೆ ಬದಲಾಯಿಸಿ. ಬದಲಾಯಿಸುವ ಮುನ್ನ ನಿಮ್ಮನ್ನು ಸ್ವಚ್ಛ ಮಾಡಿಕೊಳ್ಳಿ.
  5. ಬದಲಾಯಿಸಿದ ಬಟ್ಟೆಗಳನ್ನು ಒಗೆಯಲು ಕೂಡಲೆ ಲಾಂಡ್ರಿ ಚೀಲಕ್ಕೆ ಹಾಕಿ. ಇಲ್ಲವಾದಲ್ಲಿ, ಪ್ರತ್ಯೇಕ ಬಕೆಟ್ ಅಥವಾ ಚೀಲಕ್ಕೆ ಒಗೆಯಬೇಕಾದ ಬಟ್ಟೆಗಳೊಡನೆ ಹಾಕಬೇಕು. ಅಂತಹ ಬಕೆಟ್ ಅಥವಾ ಚೀಲವನ್ನೂ ಸಹ ಆಗಾಗ ಶುಚಿ ಮಾಡುತ್ತಿರಬೇಕು.

ಕೆಲವುಪ್ರಮುಖಲಿಂಕ್ಗಳು:

ಸರ್ಕಾರದ ಮಾರ್ಗಸೂಚಿಗಳು : https://www.mohfw.gov.in

ಸರ್ಕಾರದ ಕೊರೊನಾ ವೈರಸ್ ಸಹಾಯವಾಣಿ ಸಂಖ್ಯೆ: https://www.mohfw.gov.in/coronvavirushelplinenumber.pdf

ಮೂಲಭೂತ ಸಂಗತಿಗಳು:      https://www.mohfw.gov.in/pdf/FAQ.pdf

 WHO ನ ಕೆಲವು ಮಿತ್ ಬಸ್ಟರ್ ಗಳು: https://www.who.int/emergencies/diseases/novel-coronavirus-2019/advice-for-public/myth-busters

ಕೊರೊನಾ ವೈರಸ್ ಬಗ್ಗೆ WHO ನ ವೆಬ್ಸೈಟ್:
https://www.who.int/emergencies/diseases/novel-coronavirus-2019

Leave a Reply

This site uses Akismet to reduce spam. Learn how your comment data is processed.